WELCOME TO RIGHT TO EDUCATION PROCESS - 2016  
RTE -2016 Admission Process   

2016-17  ನೇ ಸಾಲಿನ  ಆರ್.ಟಿ.ಇ ಪ್ರವೇಶ ಪ್ರಕ್ರಿಯೆಗೆ ಸ್ವಾಗತ

         ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಗಮನಿಸಬೇಕಾದ ಅಂಶಗಳು

·
ಅಭ್ಯರ್ಥಿಗೆ ಸಂಬಂಧಿಸಿದ ಸರಿಯಾದ ಮಾಹಿತಿಗಳನ್ನು ಅರ್ಜಿಯಲ್ಲಿ ನಮೂದಿಸುವುದು. ತಪ್ಪು ಮಾಹಿತಿ ನೀಡಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕೃರಿಸಲಾಗುವುದು.
·
ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. ಒಂದೇ ಅರ್ಜಿಯಲ್ಲಿ ಗರಿಷ್ಠ ಐದು ಶಾಲೆಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.
·
ಅರ್ಜಿ ಸಲ್ಲಿಸುವಾಗ ವಿಳಾಸದ ದಾಖಲೆಗಾಗಿ ಮತದಾರರ ಗುರತಿನ ಚೀಟಿ  ಸಂಖ್ಯೆ ಅಥವಾ ಆಧಾರ್ ಕಾರ್ಡ್ ನಲ್ಲಿ ನಮೂದಾಗಿರುವ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವ ಸ್ವೀಕೃತಿ ಸಂಖ್ಯೆಯನ್ನು ಕ್ರಮಬದ್ದವಾಗಿ  ನಮೂದಿಸುವುದು. ಒಂದು ಸಂಖ್ಯೆ ವ್ಯತ್ಯಾಸವಾದರೂ ಸಹಾ ಅರ್ಜಿಯನ್ನು ತಿರಸ್ಕೃತಗೊಳಿಸಲಾಗುವುದು
·
ತಂದೆ/ತಾಯಿ/ಪೋಷಕರ ವಿಳಾಸದ ದಾಖಲೆ ಸಲ್ಲಿಸುವಾಗ ವಿಳಾಸದ ದಾಖಲೆಗಳಲ್ಲಿ ನಮೂದಾಗಿರುವ ಹೆಸರು ಮತ್ತು ವಿಳಾಸ ಹಾಗೂ ನೋಂದಣಿ ಸಂಖ್ಯೆಯನ್ನು ಯಥಾವತ್ತಾಗಿ ನಮೂದಿಸುವುದು.ಇದರಲ್ಲಿ ಯಾವುದೇ ವ್ಯತ್ಯಾಸವಾದಲ್ಲಿ ಅರ್ಜಿ ತಿರಸ್ಕತಗೊಳ್ಳುವುದು.
·
ಹುಟ್ಟಿದ ದಿನಾಂಕ 1-6-2016 ಕ್ಕೆ ಎಲ್.ಕೆ.ಜಿ ಶಾಲೆಗೆ ಅರ್ಜಿ ಸಲ್ಲಿಸಲು ಕನಿಷ್ಠ 3 ವರ್ಷ 10 ತಿಂಗಳುಗಳಿಂದ ಗರಿಷ್ಠ 4 ವರ್ಷ 10 ತಿಂಗಳು. ಒಂದನೇ ತರಗತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 5 ವರ್ಷ 10 ತಿಂಗಳುಗಳಿಂದ ಗರಿಷ್ಠ 6 ವರ್ಷ 10 ತಿಂಗಳುಗಳ ವಯೋಮಿತಿ ಒಳಗಿರಬೇಕು.
·
ಜನನ ಪ್ರಮಾಣ ಪತ್ರವಿದ್ದಲ್ಲಿ ಪ್ರಮಾಣ ಪತ್ರದ ನೋಂದಣಿ ಸಂಖ್ಯೆಯನ್ನು ನಮೂದಿಸುವುದು.
·
ಜಾತಿ ಮತ್ತು ಆದಾಯ ಪ್ರಮಾಣ ಪತ್ರದ  ಸಂಖ್ಯೆಯನ್ನು ನಿಗದಿತ ಸ್ಥಳದಲ್ಲಿ ಕ್ರಮಬದ್ದವಾಗಿ ನಮೂದಿಸುವುದು.
·
ವಿಶೇಷ ಕೋಟಾದ (ಅಂಗವಿಕಲ/ಸಿ.ಡ್ಲ್ಯೂ.ಎಸ್.ಎನ್/ ಹೆಚ್ಐವಿ/ಮಂಗಳಮುಖಿ/ ಇತರೆ) ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ಸಂಬಂಧಿಸಿದ ಪ್ರಮಾಣಪತ್ರದ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು.
                                                                                                                                                                       

 
Designed & Developed by e-Governance Unit, Department Of Public Instuction Bengaluru.